`ಆಕ್ರಮಣ` ಎಲ್ಲಿ ಆರಂಭವೋ ಅಲ್ಲೇ ಚಿತ್ರೀಕರಣ ಅಂತ್ಯ!
Posted date: 22 Mon, Apr 2013 – 03:48:19 PM

ಅರಮನೆಗಳ ನಗರ ಮೈಸೂರಿನಲ್ಲಿ ಆರಂಭವಾದ ‘ಆಕ್ರಮಣ’ ಅಲ್ಲಿಯೇ ಇನ್ನೈದು ದಿನಗಳ ಚಿತ್ರೀಕರಣದಿಂದ ಸಮಾಪ್ತಿಗೊಳ್ಳಲಿದೆ. ಸಧ್ಯಕ್ಕೆ ಬೇಕಲ್ಕೋಟೆಯಲ್ಲಿ ಒಂದು ಹಾಡಿನ ಚಿತ್ರೀಕರಣವನ್ನು ಈ ತಿಂಗಳ ೨೧ ರಿಂದ ೨೪ ರ ವರೆಗೆ ಮುಗಿಸಿಕೊಂಡು ಚಿತ್ರತಂಡ ಚಿತ್ರೀಕರಣ ಪೂರ್ತಿಗೊಳಿಸಲು ಮೈಸೂರಿಗೆ ಪ್ರಯಾಣ ಹಮ್ಮಿಕೊಳ್ಳಲಿದೆ. ಬೇಕಲ್ ಕೋಟೆಯ ಹಾಡಿಗೆ ಕಲೈ ಅವರ ನೃತ್ಯ ಸಂಯೋಜನೆ ಮಾಡಿರುವರು.ಶಂಕರ್ ಅವರ ಸಾಹಿತ್ಯಕ್ಕೆ ಚಿತ್ರದ ನಾಯಕ ರಘು ಮೂಕರ್ಜಿ ಹಾಗೂ ನಾಯಕಿ ಡೈಸಿ ಷಾ ಪಾಲ್ಗೊಂಡಿದ್ದರು.
‘ಆಕ್ರಮಣ’ ಆಕರ್ಷಣೆ ನೋಡುಗರಿಗೆ ೩ ಡಿ ತಂತ್ರಜ್ಞಾನದಲ್ಲೂ ಲಭ್ಯ ಆಗಲಿದೆ ಎಂದು ನಿರ್ಮಾಪಕರುಗಳಾದ ಸುರೇಶ್ ಜೈನ್, ನಿರ್ಮಲ್ ಜೈನ್ ಹಾಗೂ ಪ್ರಸನ್ನಕುಮಾರ್ ಯೋಜಿಸಿದ್ದಾರೆ. ‘ಆಕ್ರಮಣ’ ಕನ್ನಡ ಸಿನೆಮಾ ೩ ಡಿ ಹಾಗೂ ೨ ಡಿ ಸೊಬಗಿನಲ್ಲಿ ಕಾಣಸಿಗುವ ಸಿನೆಮಾ ಆಗಲಿದೆ.

ಈ ಹಿಂದೆ ಕೆ.ಜಿ. ರತೀಶ್ ಕುಮಾರ್ ಕೇರಳ ರಾಜ್ಯದಲ್ಲಿ ‘ಚೋಟ ಚೇತನ್’ ೩ಡಿ ಸಿನೆಮಾದಲ್ಲಿ ಹಾಗೂ ‘ಕಠಾರಿ ವೀರ ಸುರ ಸುಂದರಂಗಿ’ ಚಿತ್ರಕ್ಕೂ ತೊಡಗಿಸಿಕೊಂಡವರು ‘ಆಕ್ರಮಣ’ ಸಿನೆಮಾದ ೩ ಡಿ ಛಾಯಾಗ್ರಹಣವನ್ನು ಹಾಗೂ ೨ ಡಿ ಛಾಯಾಗ್ರಹಣ ಶಿವಕುಮಾರ್ ಅವರು ನಿರ್ವಹಿಸಿ ಕೊಂಡಿದ್ದಾರೆ.  

‘ಆಕ್ರಮಣ’ ಚಿತ್ರದ ನಿರ್ದೇಶಕರಾದ ಪ್ರಸನ್ನ ಕುಮಾರ್ ಅವರು ಹಿರಿಯ ನಿರ್ದೇಶಕರುಗಳಾದ ನಾಗಣ್ಣ ಹಾಗೂ ಸುರೇಶ್ ಕೃಷ್ಣ ಅವರ ಬಳಿ ಸಹಾಯಕರಗಿ ದುಡಿದವರು ‘ಏ ೧ ಕ್ರಿಯೇಷನ್’ ಬ್ಯಾನರ್ ಇಂದ ಸ್ವತಂತ್ರ ನಿರ್ದೇಶಕರಗುತ್ತಿದ್ದಾರೆ.
ನಾಯಕರಾಗಿ  ರಘು ಮುಖರ್ಜಿ, ಡೈಸಿ ಷಾ ನಾಯಕಿ. ಅವಿನಾಷ್, ಶರತ್ ಲೋಹಿತಾಶ್ವ, ಮುನಿ, ಸಿದ್ಲಿಂಗು ಶ್ರೀಧರ್, ಸಂಗೀತ, ಸುಚಿತ್ರಾ, ಸದಾಶಿವ ಬ್ರಹ್ಮವರ್, ಶಿವಾಜಿ ಜಾದವ್, ಪ್ರಕಾಷ್ ಶೇನೊಯ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಸತೀಶ್ ಆರ್ಯ ಅವರ ಸಂಗೀತ ಈ ಕುತೂಹಲ, ಪ್ರೇಮ, ಭಾವನಾತ್ಮಕ ಅಂಶಗಳನ್ನು ಒಳಗೊಂಡ ಚಿತ್ರಕ್ಕೆ ನೀಡಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed